Kasturi Kannada Sangha
  • Home
  • Events - Save the dates
    • Ugadi 2020
  • About
    • About Us
    • Executive Committee
    • Kasturi Youth Committee
    • Contact Us >
      • Membership
  • Kasturi Magazine
  • Volunteer Activities
    • 2019-2020
    • 2017-2018
  • Photos
    • 2019 >
      • Deepavali
      • Ganesha Festival Photos 2019
      • Navika 2019
      • Cooking at the temple
      • Kasturi Picnic Pictures
      • Yugadi 2019 >
        • Yugadi pictures 2019
    • 2018 >
      • Events 2018
      • Ganesha Habba 2018 >
        • Ganesha Pooja Pictures 2018
      • Deepavali 2018
      • Summer Picnic 2018 Photo and Videos
      • Ugadi 2018 >
        • Ugadi 2018 Pictures and Videos
      • Summer Picnic 2018
    • 2017 >
      • 2017 Ugadi >
        • Ugadi 2017 Pictures and Videos
      • Ganesha 2017
      • Picnic 2017
      • Deepavali 2017 Photos and Videos
    • Past Events

Kasturi Kannada Sangha News and Events


Daasa Vaibhava August 2017
​​
Picture
​ದಾಸರ ಪದಗಳಲ್ಲಿ ಭಕ್ಷ್ಯಭೋಜ್ಯಗಳು !

 ದಾಸರೆಂದರೆ ಪುರಂದರ ದಾಸರಯ್ಯಾ....

ಕೃಷ್ಣನ ಗುಣಗಾನದ ನೆಪದಲ್ಲಿ ದಾಸರು ಬೆಣ್ಣೆ, ಹಾಲು, ತುಪ್ಪ, ಮೊಸರು ಮೊದಲಾದ ಹೈನು ಪದಾರ್ಥಗಳನ್ನು ತಮ್ಮ ಪದಗಳಲ್ಲಿ ಯಥೇಷ್ಟ ಬಳಸಿದ್ದಾರೆ. ಎಷ್ಟೆಂದರೆ ಪರಮಾತ್ಮನು ಒಂದು ವೇಳೆ cholesterol conscious ಅಗಿದ್ದಿದ್ದರೆ ದಾಸರಿಗೆ ಸಾಕು ನಿಲ್ಲಿಸು, ನಾನು ಡಯಟ್‌ನಲ್ಲಿದ್ದೇನೆ ಎಂದು ಕನಸಲ್ಲಾದರೂ ಬಂದು ಎಚ್ಚರಿಸುತ್ತಿದ್ದುದು ಗ್ಯಾರಂಟಿ. ಹಾಗೆ ಮಾಡಲಿಲ್ಲ ನಮ್ಮ ಪುಣ್ಯ. ಪುರಂದರದಾಸರು ಮತ್ತೂ ಮತ್ತೂ ಬೆಣ್ಣೆ ಹಚ್ಚಿದರು, ತುಪ್ಪ ಸುರಿದರು. ರುಚಿರುಚಿ ಯಾದ ಕೀರ್ತನೆಗಳನ್ನು ರಚಿಸಿದರು. ಅವೆಲ್ಲ ಈ ಲೇಖನಕ್ಕೆ ಕಚ್ಚಾ ಸಾಮಗ್ರಿಯಾದುವು.

ಪಾಯಸದೊಂದಿಗೆ ನಾವು ಸಾಂಪ್ರದಾಯಿಕ ಊಟ ಶುರುಮಾಡಿದಂತೆ ಮೊದಲು ಪಾಯಸದ ವಿಷಯ ನೋಡೋಣ. ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ... ಹಾಡಿನಲ್ಲಿ ಪುರಂದರದಾಸರು, ‘ಮುಪ್ಪು ಬಂದಿತಲ್ಲಾ ಪಾಯಸ ತಪ್ಪದೆ ಉಣಲಿಲ್ಲ... ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ಧೊಪ್ಪನೆ ಬಿತ್ತಲ್ಲ...! ’ ಎಂದಿದ್ದಾರೆ. ಅದಕ್ಕಿಂತಲೂ ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲನಾಮ ತುಪ್ಪವ ಬೆರೆಸಿ ಬಾಯ ಚಪ್ಪರಿಸಿರೋ...’ ಹಾಡನ್ನೇ ತೆಗೆದುಕೊಳ್ಳಿ. ಅದರ ಚರಣಗಳಲ್ಲಿ ಪಾಯಸ ತಯಾರಿಯ ವರ್ಣನೆ ಎಷ್ಟು ಸೊಗಸಾಗಿದೆ! ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ... ಸುಮ್ಮನೆ ಸಜ್ಜಿಗೆ ತೆಗೆದು ಕಮ್ಮನೆ ಶಾವಿಗೆ ಹೊಸೆದು... ಹೃದಯವೆಂಬೊ ಮಡಿಕೆಯಲ್ಲಿ ಭಾವ ಎಂಬ ಹೆಸರನ್ನಿಟ್ಟು... ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು... ತಿನ್ನಬೇಕಂತೆ ಪಾಯಸವನ್ನು. 

ಮುಖ್ಯವಾದುದು ಅತಿರಸ ಮತ್ತು ಅಪ್ಪ. ‘ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ...’ ಕೃತಿಯಲ್ಲಿ ವರ್ಣಿಸಿದಂತೆ ಅಪ್ಪ-ಅತಿರಸಗಳನ್ನು ಮೆದ್ದ ಸ್ವಾಮಿ ಅಸುರರನ್ನು ಕಾಲಲ್ಲೇ ಒದ್ದನಂತೆ! ‘ಓಡಿ ಬಾರೈ ವೈಕುಂಠಪತಿ ನಿನ್ನ ನೋಡುವೆ ಮನದಣಿ ನಾ...’ ಹಾಡಿನಲ್ಲೂ ದಾಸರು ವೈಕುಂಠಪತಿಗೆ ಎಣ್ಣೋರಿಗತಿರಸ ದಧಿ ಘೃತವೋ ರಂಗ ಎನ್ನಯ್ಯ ನಿನಗೆ ಕೊಡುವೆ ಬಾರೊ... ಎನ್ನುತ್ತಾರೆ. ಅತಿರಸ ಎಂದರೆ ಅಕ್ಕಿಹಿಟ್ಟಿಗೆ ಬೆಲ್ಲದಪಾಕ ಸೇರಿಸಿ ಬಾಳೆ ಎಲೆ ಅಥವಾ ಪ್ಲಾಸ್ಟಿಕ್‌ ಮೇಲೆ ಕೈಯಿಂದ ತಟ್ಟಿ ಅದನ್ನು ತುಪ್ಪದಲ್ಲಿ ಕರಿದು ಮಾಡುವ ಒಂದು ಕಜ್ಜಾಯ. ಅಪ್ಪ ಅಂದರೆ ಗೊತ್ತಲ್ಲ , ಏಳು ತೂತು (groove)ಗಳುಳ್ಳ ಕಾವಲಿಯಲ್ಲಿ ದೋಸೆಹಿಟ್ಟಿನದಂಥದನ್ನು ಹಾಕಿ ಮಾಡುವ ರುಚಿರುಚಿ ತಿಂಡಿ.

ಅಪ್ಪ-ಅತಿರಸದಂತೆ ಹೋಳಿಗೆ ಕೂಡ ಗೊತ್ತು ದಾಸರಿಗೆ. ಹೋಳಿಗೆ ಮಾಡುವಾಗಿನ ಕಣಕವನ್ನಲ್ಲವೇ ಅವರು ‘ಕಣಕ ಕುಟ್ಟೋವಲ್ಲಿಗೆ ಹೋಗಿ ಇಣುಕಿ ಇಣುಕಿ ನೋಡಿದಿರಿ....’ (ಡೊಂಕುಬಾಲದ ನಾಯಕರೆ ನೀವೇನಾಟವ ಆಡಿದಿರಿ... ಪದ್ಯದಲ್ಲಿ) ಉಲ್ಲೇಖಿಸಿದ್ದು ? ಆ ಹಾಡು ನಿಜವಾಗಿಯೂ ನಾಯಿಗಳನ್ನುದ್ದೇಶಿಸಿ ಬರೆದದ್ದೋ ಎಂದೇ ಅನುಮಾನ ಬರುತ್ತದೆ. ಅದರಲ್ಲೇ, ಹುಗ್ಗಿ ಮಾಡೊವಲ್ಲಿಗೆ ಹೋಗಿ ಸೌಟಿಂದ ಬಡಿಸಿಕೊಂಡು (ಅಂದ್ರೆ ಬಡಿತ ತಿಂದು) ಬಂದಿರಿ ಎಂದು ನಾಯಿಗಳ ಬಗ್ಗೆ ಮರುಕಪಡುತ್ತಾರೆ ದಾಸರು. ‘ಬಡಿಸಿಕೊಂಡು’ ಎನ್ನುವಲ್ಲಿನ wordplay ಗಮನಿಸಿ.

ಮಾನವ ಕಂಡ ಆಧುನಿಕತೆಯಲ್ಲಿ ಮೊದಲು ಬೆಲ್ಲ ಆಮೇಲೆ ಸಕ್ಕರೆ ತಯಾರಿ/ಬಳಕೆ ಬಂದದ್ದಿರಬಹುದು ಎಂದು ನಾವೆಣಿಸುತ್ತೇವೆ. ಆದರೆ ಪುರಂದರದಾಸರು ಬೆಲ್ಲಕ್ಕಿಂತ ಸಕ್ಕರೆಯನ್ನೇ ಜಾಸ್ತಿ ಉಪಯೋಗಿಸೋದು. ಭಾಗ್ಯದ ಲಕ್ಷ್ಮಿಯ ಶುಕ್ರವಾರದ ಪೂಜೆಯ ವೇಳೆಗೆ ಸಕ್ಕರೆ-ತುಪ್ಪದ ಕಾಲುವೆಯನ್ನೇ ಹರಿಸುತ್ತಾರವರು. ಆ ಕಾಲುವೆ ಹೇಗಿರಬಹುದು? ತುಂಗಭದ್ರಾ ಎಡದಂಡೆ ಕಾಲುವೆ ಅಥವಾ ಮೇಲ್ದಂಡೆ ಕಾಲುವೆಯಂತಿರಬಹುದೇ? just for imagination! ಇನ್ನೊಂದು ಮಾತು. ಕಾಲುವೆಗಳಲ್ಲಿ ತುಪ್ಪವನ್ನು ಹರಿಸಿದ ದಾಸರಿಗೆ ಆವಾಗಲೇ ಗೊತ್ತಿತ್ತೋ ಏನೊ ಮುಂದೆ ಏಡುಕೊಂಡಲವಾಡ ವೆಂಕಟರಮಣನ (ತಿರುಪತಿ) ಲಡ್ಡುಪ್ರಸಾದ ತಯಾರಿಗೆ ನಮ್ಮ ಕರ್ನಾಟಕದಿಂದಲೇ ನಂದಿನಿ ತುಪ್ಪ ಸರಬರಾಜು ಆಗುತ್ತದೆಯೆಂಬುದು. ತುಪ್ಪ-ಸಕ್ಕರೆಗಳಂತೆಯೇ ಕಲ್ಲುಸಕ್ಕರೆಯನ್ನೂ ಧಾರಾಳ ಪ್ರಮೋಟ್‌ ಮಾಡಿದ್ದಾರೆ ದಾಸರು. ‘ಕಲ್ಲುಸಕ್ಕರೆ ಕೊಳ್ಳಿರೊ...’ ಹಾಡಿನಲ್ಲಿ ಪುಲ್ಲಲೋಚನ ಶ್ರೀಕೃಷ್ಣ ನಾಮವೇ ಕಲ್ಲುಸಕ್ಕರೆಯಿದ್ದಂತೆ ಎಂದಿದ್ದಾರೆ.

ಸಿಹಿಯನ್ನಷ್ಟೇ ತಿನಿಸಿದ್ದೇ ಪುರಂದರದಾಸರು? ಖಂಡಿತವಾಗಿಯೂ ಅಲ್ಲ ! ‘ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ ದಿವ್ಯ ಷಡುರಸಾನ್ನವಿಟ್ಟನೊ...’ ಎಂಬ ಹಾಡಿನಲ್ಲಿ ಅವರು ಫುಲ್‌ ಮೆನು ಡಿಸ್ಪ್ಲೇ ಮಾಡಿದ್ದಾರೆ. ಮೇಲಾಗಿ ಈ ರಸಪಾಕವನ್ನು ಸ್ವತಃ ಭೂದೇವಿ-ರಮಾದೇವಿಯರೇ ಸ್ವಹಸ್ತದಿಂದ ಮಾಡಿದ್ದೆಂದೂ ವರ್ಣಿಸಿದ್ದಾರೆ.

ಅರವತ್ತು ಶಾಕ ಲವಣ ಶಾಕ ಮೊದಲಾದ । ಸರಸ ಮೊಸರು ಬುತ್ತಿ ಚಿತ್ರಾನ್ನವೋ
ಪರಮ ಮಂಗಳ ಅಪ್ಪವು ಅತಿರಸ । ಹರುಷದಿಂದಲಿಯಿಟ್ಟ ಹೊಸ ತುಪ್ಪವೋ
ಹಿಡೆಯಂಬೊಡೆ ದಧಿವಡೆಯು ತಿಂಥಿಣಿ । ಒಡೆಯ ಎಡಗೆ ಒಡನೆ ಬಡಿಸಿದ
ದೃಢವಾದ ಪದಾರ್ಥಗಳನೆಲ್ಲ ಇಡಿಸಿದೆ । ಒಡೆಯ ಶ್ರೀ ಪುರಂದರ ವಿಠಲನೆ ಉಣ್ಣೊ

ಅಂದರೆ ಚಿತ್ರಾನ್ನ, ಬುತ್ತಿಯನ್ನ, ಮೊಸರನ್ನ, ಆಂಬೊಡೆ, ದಹಿವಡಾ (ತೈರ್‌ವಡೆ) ಇತ್ಯಾದಿ ಕುಕ್ಕಿಸಿದ್ದಾರೆ ಪುರಂದರದಾಸರು. ಇನ್ನೂ ಒಂದು ಸ್ವಾರಸ್ಯಕರ ಸಂಗತಿಯೆಂದರೆ, ಭಾರತದಲ್ಲಿ ಪ್ರಪ್ರಥಮವಾಗಿ ಅಡಿಗೆಯಲ್ಲಿ ಮೆಣಸಿನ ಉಪಯೋಗ ಉಲ್ಲೇಖವಾಗಿರುವು

ವಹವ್ವಾರೆ ಮೆಣಸಿನಕಾಯಿ 
ಒಣರೊಟ್ಟಿಗೆ ತಂದೆನೊ ತಾಯಿ  ||ಪ||

ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ ||೧||

ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡರೆದರೆ ಅತಿ ಖಾರೆಂಬೆ ||೨||

ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನ ನೆನೆಯೋದು ಭಾರ ||೩||

ಭಗವಂತನಿಗೆ ಅರ್ಪಣೆಗೋಸ್ಕರ ಮಾತ್ರವಲ್ಲದೆ ಭಕ್ತಾದಿಗಳ ಬದುಕಿಗೆ ಬೆಳಕಾಗುವಂತೆ ಬರೆದ ಹಿತನುಡಿಯ ಪದಗಳಲ್ಲೂ ದಾಸರು ತಿಂಡಿತಿನಿಸನ್ನು ಉಲ್ಲೇಖಿಸಿದ್ದಾರೆ. ಅಂಥವುಗಳ ಪೈಕಿ ಒಂದೆರಡನ್ನು ಅವಲೋಕಿಸೋಣ.
ಜಿಪುಣಬುದ್ಧಿಯವರನ್ನು ಮೂದಲಿಸುತ್ತ ದಾಸರು ‘ಹುಗ್ಗಿಯ ತುಪ್ಪವು ಮನೆಯಾಳಗಿರಲಿಕ್ಕೆ ಗುಗ್ಗುರಿಯನ್ನವ ತಿಂದ್ಯಲ್ಲ ಪ್ರಾಣಿ... ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ...’ ಎಂದಿದ್ದಾರೆ - ‘ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವಲ್ಲೊ ಪ್ರಾಣಿ...’ ಎಂಬ ಕೃತಿಯಲ್ಲಿ. ಇಂಥ ಜಿಪುಣರು ನಮ್ಮ-ನಿಮ್ಮ ದೈನಂದಿನ ವ್ಯವಹಾರಗಳಲ್ಲೂ ಬೇಕಾದಷ್ಟು ಮಂದಿ ಸಿಗುತ್ತಾರಲ್ಲವೆ? ಇದ್ದಾಗ ಅದನ್ನು ಅನುಭವಿಸಿ ಆನಂದಿಸದೆ ಅದಿಲ್ಲ ಇದಿಲ್ಲ ಎಂದು ಪರಿತಪಿಸುವ ಅಳುಮುಂಜಿಗಳಿಗೇನು ಕೊರತೆಯಿದೆಯೇ? ಇರುವುದನು ಬಿಟ್ಟು ಇಲ್ಲದುದರ ಕಡೆ ತುಡಿತ.... ಅಡಿಗರು ಅಡಿಗೆ ಮಾಡಿ ನಮಗೆ ಬಡಿಸಿದ್ದೂ ಅದೇ ತತ್ವವನ್ನಲ್ಲವೇ?

(srivathsajoshi@yahoo.com)

Picture
Picture

Kasturi Art Gallery - Sharmila's Art Gallery

Subscribe

Submit
Powered by Create your own unique website with customizable templates.
  • Home
  • Events - Save the dates
    • Ugadi 2020
  • About
    • About Us
    • Executive Committee
    • Kasturi Youth Committee
    • Contact Us >
      • Membership
  • Kasturi Magazine
  • Volunteer Activities
    • 2019-2020
    • 2017-2018
  • Photos
    • 2019 >
      • Deepavali
      • Ganesha Festival Photos 2019
      • Navika 2019
      • Cooking at the temple
      • Kasturi Picnic Pictures
      • Yugadi 2019 >
        • Yugadi pictures 2019
    • 2018 >
      • Events 2018
      • Ganesha Habba 2018 >
        • Ganesha Pooja Pictures 2018
      • Deepavali 2018
      • Summer Picnic 2018 Photo and Videos
      • Ugadi 2018 >
        • Ugadi 2018 Pictures and Videos
      • Summer Picnic 2018
    • 2017 >
      • 2017 Ugadi >
        • Ugadi 2017 Pictures and Videos
      • Ganesha 2017
      • Picnic 2017
      • Deepavali 2017 Photos and Videos
    • Past Events